Hi there! Welcome to mmp-notes. Here, I note some of "my" thoughts, hacks ideas and much more. You may find some of it useful or interesting. Let me know your thoughts/comments on the content here by commenting them on the posts.

The old version of this blog can be found here

Thanks to


Posts

ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ
ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯಿತೆನ್ನ ಬದುಕು ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ ಬಡ್ಡಿ ಬಾಚಿ ಹೋಗಿ ಬಾಯಿಗೆ ಗಡ್ಡೆ ಬಿದ್ದಿತು ಹೆಡಿಗೆ ತುಂಬ ದೇವರು ನಮ್ಮ ...

ಮೂರು ನಾಮಗಳ ಧರಿಸಿದ ಕಾರಣವೇನು
೩ನೇ ಪದ್ಯದ ಸೌಂದರ್ಯ ನೋಡಿ ಬೇರೆ ಕಡೆ ಸಿಕ್ಕರೂ ಇಲ್ಲಿ ನಕಲು ಮಾಡಿದ್ದೇನೆ. https://youtu.be/MqmnwrFUsuI ಮೂರು ನಾಮಗಳ ಧರಿಸಿದ ಕಾರಣವೇನು | ಸಾರಿ ಪೇಳೆಲೋ ಈಗಲೇ ||ಪ|| ಶ್ರೀ ರಮಾಪತೇ ಶ್ರೀನಿವಾಸ ವೇಂಕಟರಮಣ | ಯಾರು ಇಟ್ಟರೋ ನಿನಗೇ ಮೂರು ನಾಮಗಳ ||ಅಪ|| ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂ...

ವಿಜಯ ಗುರುಗಳಂಘ್ರಿಕಮಲ
vijayadasru
ಬಸ್ ಸ್ಟ್ಯಾಂಡಿನಲ್ಲಿ ಇತ್ತೀಚಿಗೆ ದಾಸರ ಪದಗಳನ್ನು ಸ್ಪೀಕರ್ನಲ್ಲಿ ಹಚ್ಚುತ್ತಿದ್ದಾರೆ. ಈ ಪದ ಕನ್ನಡದಲ್ಲಿ ಎಲ್ಲಿಯೂ ಸಿಗಲಿಲ್ಲ. ಇಂಗ್ಲಿಷ್ನಲ್ಲಿ ನೋಡಿ ಹಾಡುವುದು ಸರಳವಲ್ಲವಂತ ಕನ್ನಡದಲ್ಲಿ ಬರೆದೆ. ಬಹಳಷ್ಟು ಶಬ್ದಗಳ ಅರ್ಥ ತಿಳಿದಿಲ್ಲ, ಗೊತ್ತಿದ್ದರೆ ತಿಳಿಸಿ ವಿಜಯ ಗುರುಗಳಂಘ್ರಿಕಮಲ ಭಜನೆ ಮಾಡಿರೋ ...

ಇಂಥವಗ್ಹ್ಯಾಂಗ ಮನಸೋತೆ
ಬಹಳ ದಿನಗಳಿಂದ ಗುನುಗುತ್ತಿದ್ದರೂ, ಈ ಪದ್ಯದ ಮೊದಲ ಎರಡು ಸಾಲಿನ ಅರ್ಥ ತಿಳಿದಿರಲಿಲ್ಲ. ಇವತ್ತು ಹೇಗೊ ಹೊಳೆಯಿತು. ಗಿರಿಯಮ್ಮನ ಈ ಕೀರ್ತನೆಯಲ್ಲಿ ದಶಾವತಾರಗಳ ಸ್ತುತಿ ಇದೆ. ಇಂಥವಗ್ಹ್ಯಾಂಗ ಮನಸೋತೆ ಬಹು ಪಂಥವಾಡಿದ ಜಗನ್ಮಾತೆ ಆವಾಗ ನಾರಿದ ಮೈಯ್ಯ - (ಮತ್ಸ್ಯ) ಬಿಚ್ಚಿ ತೋರಿ ಆಡುವ ಕಾಲು ಕೈಯ್ಯ - (ಕೂರ್ಮ...

ಏಕೆ ಕಡೆಗಣ್ಣಿಂದ ನೋಡುವೆ
krushna, purandaradasa
ಹಲವು ಕಾಲದಿ ನಿನ್ನ ಹಂಬಲವು ಎನಗೆ ಕೃಷ್ಣ ಒಲಿದು ಪಾಲಿಸಬೇಕು ವಾರಿಜನಾಭ ಕೆಳಗೆ ನೀ ನೂಕಿದರೆ ಇನ್ನಾರು ಸಲಹುವರೋ ಛಲವ ಬಿಟ್ಟು ಕಾಯೋ ಪುರಂದರ ವಿಠ್ಠಲ ಏಕೆ ಕಡೆಗಣ್ಣಿಂದ ನೋಡುವೆ ನೀ ಕರುಣಾಕರನಲ್ಲವೆ ಹರಿಯೇ ಭಕ್ತವತ್ಸಲನಲ್ಲವೇ ಕೃಷ್ಣ ಚಿತ್ಸುಖದಾತ ನೀನಲ್ಲವೇ ಅತ್ಯಂತ ಅಪರಾಧಿ ನಾನಾದೊಡೆನಯ್ಯ ಇತ್ತಿತ್ತ ...