ಇಂಥವಗ್ಹ್ಯಾಂಗ ಮನಸೋತೆ
1 min readSeptember 11, 2022
krushna
lakshmi
helavanakatte
giriyamma
ಬಹಳ ದಿನಗಳಿಂದ ಗುನುಗುತ್ತಿದ್ದರೂ, ಈ ಪದ್ಯದ ಮೊದಲ ಎರಡು ಸಾಲಿನ ಅರ್ಥ ತಿಳಿದಿರಲಿಲ್ಲ. ಇವತ್ತು ಹೇಗೊ ಹೊಳೆಯಿತು. ಗಿರಿಯಮ್ಮನ ಈ ಕೀರ್ತನೆಯಲ್ಲಿ ದಶಾವತಾರಗಳ ಸ್ತುತಿ ಇದೆ.
ಇಂಥವಗ್ಹ್ಯಾಂಗ ಮನಸೋತೆ
ಬಹು ಪಂಥವಾಡಿದ ಜಗನ್ಮಾತೆ
ಆವಾಗ ನಾರಿದ ಮೈಯ್ಯ - (ಮತ್ಸ್ಯ)
ಬಿಚ್ಚಿ ತೋರಿ ಆಡುವ ಕಾಲು ಕೈಯ್ಯ - (ಕೂರ್ಮ)
ಕೋರೆಯಿಂದೆತ್ತುತ ಕೊಸರಿಕೊಂಡಸುರನ - (ವರಾಹ)
ಪೋರನಿಗಾಗಿ ದೊಡ್ದ ಧೀರನ ಸೀಳಿದ - (ನರಸಿಂಹ)
ಬಡ ಬ್ರಾಹ್ಮಣನಾಗಿ ಬೇಡಿದ - (ವಾಮನ)
ತನ್ನ ಹಡೆದ ತಾಯಿಯ ಶಿರ ಕಡಿದ - (ಪರಶುರಾಮ)
ಮಡದಿ ತಮ್ಮರ ಕೂಡಿ ಅಡವಿಯ ಸೇರಿದ - (ರಾಮ)
ಕಡು ಗೋಪಿ ಗೊಲ್ಲರ ಬಾಧೆಯ ತೀರಿದ - (ಕೃಷ್ಣ)
ಬತ್ತಲೆ ನಿಂತಿದ್ದನಾಗ - (ಬುದ್ಧ)
ತೇಜಿ ಹೊತ್ತು ಮೆರೆದನಿವ ಹೀಂಗ - (ಇದು ಇನ್ನು ತಿಳಿದಿಲ್ಲ)
ಸಂತತ ಭಕುತರ ಸಲುಹುವ ಹೆಳವನಕಟ್ಟಿ
ಇಂಥ ರಂಗಯ್ಯಗೇನೆಂದು ಮನಸೋತೆ
sung by unknown (please let me know his name if you know) https://www.youtube.com/watch?v=bsLtXuUpgBU
- ಹೆಳವನಕಟ್ಟೆ ಗಿರಿಯಮ್ಮ