ವಿಜಯ ಗುರುಗಳಂಘ್ರಿಕಮಲ
1 min readOctober 01, 2022
vijayadasru
ಬಸ್ ಸ್ಟ್ಯಾಂಡಿನಲ್ಲಿ ಇತ್ತೀಚಿಗೆ ದಾಸರ ಪದಗಳನ್ನು ಸ್ಪೀಕರ್ನಲ್ಲಿ ಹಚ್ಚುತ್ತಿದ್ದಾರೆ. ಈ ಪದ ಕನ್ನಡದಲ್ಲಿ ಎಲ್ಲಿಯೂ ಸಿಗಲಿಲ್ಲ. ಇಂಗ್ಲಿಷ್ನಲ್ಲಿ ನೋಡಿ ಹಾಡುವುದು ಸರಳವಲ್ಲವಂತ ಕನ್ನಡದಲ್ಲಿ ಬರೆದೆ. ಬಹಳಷ್ಟು ಶಬ್ದಗಳ ಅರ್ಥ ತಿಳಿದಿಲ್ಲ, ಗೊತ್ತಿದ್ದರೆ ತಿಳಿಸಿ
ವಿಜಯ ಗುರುಗಳಂಘ್ರಿಕಮಲ ಭಜನೆ ಮಾಡಿರೋ
ಸುಜನಕೃತ ಜ್ಞಾನಧ್ವರ ಋತ್ವಿಜನ ಪಾಡಿರೋ
ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿ
ಅಜ್ಞಾನೊಗ್ರ ತಿಮಿರಾರ್ಕನುದ್ವಿಗ್ನ ಮುನಿಮಣಿ
ಯಜ್ಞಮಗ್ನಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿ
ವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞವರದಾನಿ
ಅಂಬೊರುಹ ಸಂಭವೋದ್ಭವಂಭೋಜ ಭೃಂಗ
ಶಂಭು ಸರ್ವೊತ್ತಮ ಶಂಕಾರಂಭ ಮಾತಂಗ
ಕಂಬುಗದ ಅಂಬುಜಾರಿ ಬಿಂಬ ಚಿನ್ಹಾಂಗ
ಬಿಂಬಕ್ರಿಯಭಾವಜ್ಞಾತ ಗುಂಭಾಂತರಂಗ
ವಿಪ್ರಜಾತಿ ವಿಪುಳಖ್ಯಾತಿ ಕ್ಷಿಪ್ರಫಲದಾತ
ಸುಪ್ರಸಾದವಾಣಿ ಅಮಿತ ಪ್ರಮತಿ ಅತಿ ಹಿತ
ಅಪ್ರತೀ ಕಾಲಂಬ ಶ್ರೀಶಸ್ವಾಪರೋಕ್ಷಿತ
ಅಪ್ರಬುದ್ಧ ಪಾಲ ಕಾರುಣ್ಯಾಪ್ರಕಾಶಿತ
ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕ
ತೀರ್ಥಕ್ಷೇತ್ರದ್ಯಟನಶೀಲ ಸಾರ್ಥಕಾಯಕ
ಕಾರ್ತಸ್ವರೇತ್ಯಾದಿ ಕಾಷ್ಟ ಕೃಷ್ಣವರ್ತ್ಮಕ
ಪಾರ್ಥಮಿತ್ರ ಸ್ತೋತ್ರರತಿ ಪುಷ್ಪಸಾಯಕ
ದ್ವಂದ್ವಾತೀತ ಬಂಧುರಾತ್ಮಾನಂದ ತುಂದಿಲ
ಸಂದರ್ಶನಾದೇವ ಪುನಂತಿವಿಗತ ವಿಹ್ವಲ
ಮಂದಾತ್ಮನಾಗಿರಲೆನಿವರ ನಂಬಲನುಗಾಲ
ಮುಂದೆ ಕುಣಿವ ತಂದೆ ವೆಂಕಟೇಶ ವಿಠ್ಠಲ