ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ
1 min readOctober 08, 2022
akka
akatakatenna
ganda
vaishnava
purandara
dasa
ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯಿತೆನ್ನ ಬದುಕು
ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು
ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ ಬಡ್ಡಿ ಬಾಚಿ ಹೋಗಿ ಬಾಯಿಗೆ ಗಡ್ಡೆ ಬಿದ್ದಿತು
ಹೆಡಿಗೆ ತುಂಬ ದೇವರು ನಮ್ಮ ಮನೆಯೊಳಗಿರುವಾಗ ಒಡವೆ ವಸ್ತು ಇಟ್ಟುಕೊಂಡು ಸುಖದೊಳಿದ್ದೆವು
ಒಡೆಯ ಹರಿಯೊಬ್ಬ ಸರ್ವರೊಡೆಯನೆಂದು ಭಜಿಸಲಾಗಿ ಒಡವೆ ಹೋಗಿ ಬಡತನ ಗಡನೆ ಬಂದಿತು
ಮಿತ್ರೆ ಕೇಳೆ ನಮ್ಮ ಮನೆ ಮದುವೆ ಮುಂಜಿ ಕಾಲದಲ್ಲಿ ಅರ್ತಿಯಿಂದ ಒಮ್ಮೆ ಕಚ್ಚೆ ಕಟ್ಟುತಿದ್ದೆವು
ನಿತ್ಯ ಕಚ್ಚೆಯನ್ನು ಹಾಕಿ ಸೀರೆಯನ್ನು ಉಡಲಾಗಿ ವ್ಯರ್ಥವಾಗಿ ಬಾಳುವ ಬದುಕು ಹಾಳಾಗಿ ಹೋಯಿತು
ಕಾರ ಹುಣ್ಣಿಮೆ ಕಾಲದಲ್ಲಿ ಮೂಲಂಗಿಗೆ ಬೆಳ್ಳುಳ್ಳಿಕ್ಕಿ ತೋರಿದರೆ ನಮ್ಮ ದೇವರು ವರವ ಕೊಡುತಿದ್ದ
ಈ ವೀರ ವೈಷ್ಣಂವಂಗೆ ಕೊಟ್ಟು ತ್ರಾಹಿ ಎನಲಾಗಿ ಸೇರಿದ ಬದುಕು ಎಲ್ಲ ಹಾರಿ ಹೊಯಿತು
ಎಲ್ಲಮ್ಮ ಯಕಲಾತಿ ಉಡ್ಡಿ ಮೈಲಾರ ದೇವರ ಕಲ್ಲೆಂದು ಭಜಿಪಾಗ ಕ್ಷೇಮವಿತ್ತೇ
ಬಲ್ಲಿದ ಪುರಂದರ ವಿಠ್ಠಲನ ಭಜಿಸಲು ಸಲ್ಲದ ವೈಕುಂಠ ಸಲ್ಲುವಂತಾದಿತು