ಏನು ಕಾರಣದಿಂದ ಮಲಗಿರುವೆಯೊ

  1 min read
  November 14, 2022
  enu karanadinda malagiruveyo vijayadasa


Recording by Padmaja Vasudevachar

ಏನು ಕಾರಣದಿಂದ ಮಲಗಿರುವೆಯೊ
ಶ್ರೀನಾಥ ರಘುಕುಲೊದ್ಭವ ದರ್ಭಶಯನ

ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೊ
ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೊ
ಜೊತಿರ್ಮಯರೂಪ ಹೇ ದರ್ಭಶಯನ

ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬ ವ್ಯಾಕುಲದಿ ಮಲಗಿದೆಯೊ
ಹನುಮ ವಂದಿತಪಾದ ಶ್ರೀ ದರ್ಭಶಯನ

ಅನಲಾಕ್ಷ ಹರನಿಗೆ ಕರುಣಿಸಿ ಮಲಗಿದೆಯೊ
ವನಜಸಂಭವನಿಗೆ ಒಲಿದು ನೀ ಮಲಗಿದೆಯೊ
ಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೊ
ಎನಗೊಲಿದ ವಿಜಯವಿಟ್ಠಲ ದರ್ಭಶಯನ

- ವಿಜಯದಾಸರು

Glossary

ದನುಜ - ರಾವಣ
ಬಲ್ಲಿದ - ಬ್ರಾಹ್ಮಣ
ಅನಲಾಕ್ಷ - ಅನಲ (ಬೆಂಕಿ)+ ಅಕ್ಷ - ಶಿವ
ವನಜಸಂಭವ - ವನಜ(ಕಮಲ) + ಸಂಭವ - ಬ್ರಹ್ಮ