ಬಯಲ ಭ್ರಾಂತಿಯ ಬಿಡಿಸಯ್ಯ
1 min readOctober 08, 2022
bayala
bhramtiya
bidisayya
vijaya
dasa
ಬಯಲ ಭ್ರಾಂತಿಯ ಬಿಡಿಸಯ್ಯ ಶ್ರೀ ಗುರುರಾಯ
ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡು
ನಾನು ಎನ್ನುವ ಭ್ರಾಂತಿ ನನ್ನದೆನ್ನುವ ಭ್ರಾಂತಿ
ಸ್ವಾಮಿ ನೀ ಬಿಡಿಸಯ್ಯ ಜ್ಞಾನಿ ಗುರುರಾಯ
ಏನು ಇಲ್ಲದೆ ಋಣ ಬಾಧೆಯ ತಾಳೆ ನಾ
ಪಾರುಗಾಣಿಸಿ ಕಾಯೋ ಪಾವನ ಹೃದಯ
ಆಶೆಪಾಶೆ ಮೋಹ ಮೋಸ ವಿಲಾಸಕ್ಕೆ
ಸೋತು ಹೊಯಿತು ಮನ ಮುನಿಕುಲಶ್ರೇಯ
ಏಸು ಜನ್ಮದ ಪಾಪ ಮೀಸಲಾಗಿದೆ ಕಾಣೆ
ಘಾಸಿ ಮಾಡದೆ ಕಾಯೊ ವಾಸುದೇವನ ಪ್ರಿಯ
ದಾನಿ ಎಂಬುದು ಕೇಳಿ ಧಾವಿಸಿ ನಾ ಬಂದೆ
ಜ್ಞಾನ ಭಿಕ್ಷೆಯ ನೀಡೊ ಜ್ಞಾನಿ ಗುರುರಾಯ
ಹೀನ ಕರ್ಮದಿಂದ ಕ್ಷೀಣವಾಯಿತು ದೇಹ
ಕಾಣುವೆನೆಂದಿಗೆ ಚರಣ ತವಕಮಲವ
ಅಂದು ಮುಕುಂದನ ಕಂಬದಿ ತೋರಿದಿ
ಆನಂದದಿ ಪಾಡಿ ನಲಿದಾಡಿದಿ
ಇಂದು ವೃಂದಾವನದಿ ಪೂಜೆಗೊಂಬುವ ದೊರೆಯೆ
ಬಂಧನ ಬಿಡಿಸಯ್ಯ ಚಂದ್ರಮುನೀಂದ್ರ
ಪಾಮರ ನಾನಯ್ಯ ಪಾಪಹರ ನೀನಯ್ಯ
ಪ್ರೇಮದಿ ದಯಮಾಡೊ ಪಾದಾಮೃತ
ಪ್ರಾರ್ಥನೆ ಅರ್ಪಣೆ ಇರಲಿ ತವ ಪಾದದಿ
ವಿಜಯವಿಟ್ಠಲ ದಾಸ ಶ್ರೀಶ ಪ್ರಭುವೆ