ಮಂಗಲ ಭಾರತಿ ದೊರೆಗೆ
1 min readMarch 06, 2021
hanuma
bheema
madhva
aarati
ಮಂಗಳ ಭಾರತಿ ದೊರೆಗೆ, ಮಂಗಳ ರಾಘವ ಪ್ರಿಯಗೆ,
ಮಂಗಳ ಶ್ರೀ ಕೃಷ್ಣನ ಭಕುತಗೆ, ಮಂಗಳ ಗುರುವರಗೆ |
ಜಲಧಿಯ ಲ೦ಘಿಸಿ, ದುರುಳ ರಾವಣನೆದೆಗೆ -
ಭರದಿ೦ದ ಗುದ್ದಿದ ವಾನರ ನಾಯಕ ಅ೦ಜನಿ ಬಾಲಕಗೆ |
ಪೊಡವಿಯೊಳ್ ಕು೦ತಿಯ ಒಡಲಜಾತನು ತನ್ನ-
ಮಡದಿಯ ಬಯಸಿದ ಕೀಚಕನಸುವನು ತಡೆಯದೆ ಕೊ೦ದವಗೆ |
ಇಳೆಯೊಳು ದುರ್ಮತವ ಅಳಿದು ವ್ಯಾಸರ ಪಾದ-
ನಳಿನಕ್ಕೆರಗುತ ಬದರಿಯಲ್ಲಿ ಮೋದದಿ ಇರುವವಗೆ |